ಅಭಿಪ್ರಾಯ / ಸಲಹೆಗಳು

ಮದುವೆ ನೋಂದಣಿ

ಮದುವೆ ನೋಂದಣಿ ಕುರಿತು FAQ’s

  • ವಿಶೇಷ ವಿವಾಹ ಅಧಿನಿಯಮ, 1954
  • ವಿಶೇಷ ವಿವಾಹ (ಕರ್ನಾಟಕ) ನಿಯಮಗಳು, 1961.
  • ಹಿಂದೂ ವಿವಾಹ ಅಧಿನಿಯಮ, 1955.
  • ಹಿಂದೂ ವಿವಾಹ ನೋಂದಣಿ (ಕರ್ನಾಟಕ) ನಿಯಮಗಳು, 1966.
  • ಪಾರ್ಸಿ ವಿವಾಹ ಮತ್ತು ವಿಚ್ಚೇದನ (ಕರ್ನಾಟಕ) ನಿಯಮಗಳು, 1961.

 

  1. ಮದುವೆಯನ್ನು ನೋಂದಣಿ ಮಾಡಿಸುವುದರಿಂದ ಆಗುವ ಪ್ರಯೋಜನಗಳೇನು?

 

  1. ಮದುವೆ ಪ್ರಮಾಣ ಪತ್ರವು ಮದುವೆಯಾದ ಬಗ್ಗೆ ಅತ್ಯುತ್ತಮ ಸಾಕ್ಷ್ಯಾಧಾರ ಮೌಲ್ಯವನ್ನು ಹೊಂದಿದ ಸರ್ಕಾರಿ ದಾಖಲೆಯಾಗಿರುತ್ತದೆ.
  2. ಮದುವೆ ಪ್ರಮಾಣ ಪತ್ರವು ವಿಶೇಷವಾಗಿ ಮಹಿಳೆಯರಿಗೆ ಸಾಮಾಜಿಕ ರಕ್ಷಣೆ ಹಾಗೂ ಆತ್ಮಸಾಕ್ಷಿಯ
  • ಭರವಸೆ ನೀಡುವ ಸರ್ಕಾರಿ ದಾಖಲೆಯಾಗಿರುತ್ತದೆ.
  1. ವಿದೇಶಗಳಿಗೆ ಪತಿ/ಪತ್ನಿಯನ್ನು ಕರೆದೊಯ್ಯಬೇಕಾದ ಸಂದರ್ಭದಲ್ಲಿ ವಿಸಾ ಪಡೆಯುವ ಸಲುವಾಗಿ ಮದುವೆ ನೋಂದಣಿ ಪ್ರಮಾಣ ಪತ್ರ ಸಹಾಯಕವಾಗುತ್ತದೆ.
  2. ಪತಿ/ಪತ್ನಿ ಇವರ ಪೈಕಿ ಯಾರಾದರೊಬ್ಬರು ಬ್ಯಾಂಕ್ ಡಿಪಾಸಿಟ್ ಅಥವಾ ವಿಮಾ ಪಾಲಿಸಿಯಲ್ಲಿ ನಾಮ ನಿರ್ದೇಶನ ಮಾಡಿರದೆ ಮರಣ ಹೊಂದಿದರೆ ಅವರ ಹೆಸರಿನಲ್ಲಿದ್ದ ಬ್ಯಾಂಕ್ ಡಿಪಾಸಿಟ್ ಅಥವಾ ವಿಮಾ ಪಾಲಿಸಿಯ ಹಣ ಪಡೆಯಲು ಮದುವೆ ನೋಂದಣಿ ಪ್ರಮಾಣ ಪತ್ರ ಸಹಾಯಕವಾಗಿರುತ್ತದೆ.

 

  1. ಸಬ್-ರಿಜಿಸ್ಟಾçರ್ ಮತ್ತು ಜಿಲ್ಲಾ ರಿಜಿಸ್ಟಾರ್ ಕಛೇರಿಗಳಲ್ಲಿ ಯಾವ ಯಾವ ಕಾಯ್ದೆಗಳನ್ವಯ ಮದುವೆಯನ್ನು ನೋಂದಾಯಿಸಲಾಗುತ್ತದೆ?

 

ಈ ಕೆಳಕಂಡ ಕಾಯ್ದೆಗಳನ್ವಯ ಮದುವೆಯನ್ನು ನೋಂದಾಯಿಸಲಾಗುತ್ತದೆ.

  1. ಹಿಂದೂ ವಿವಾಹ ಕಾಯ್ದೆ, 1955.
  2. ವಿಶೇಶ ವಿವಾಹ ಕಾಯ್ದೆ, 1954.
  • ಪಾರ್ಸಿ ವಿವಾಹ ಮತ್ತು ವಿಚ್ಚೇದನ ಕಾಯ್ದೆ, 1936.

 

  1. ಮದುವೆ ಎಲ್ಲಿ ನೋಂದಾಯಿಸಬಹುದು?

 

  1. (i)ಹಿಂದೂ ವಿವಾಹವನ್ನು ಮದುವೆ ನೆರವೇರಿಸಲ್ಪಟ್ಟ ಸ್ಥಳದ ವ್ಯಾಪ್ತಿಯ ಅಥವಾ ವಧು-ವರರು ವಾಸಿಸುವ ಸ್ಥಳದ ವ್ಯಾಪ್ತಿಯ  ಮದುವೆ ಅಧಿಕಾರಿಯ ಕಛೇರಿಯಲ್ಲಿ ನೋಂದಾಯಿಸಬಹುದು.
  2. (ii)ವಿಶೇಷ ವಿವಾಹ ಕಾಯ್ದೆ, 1954ರ ಮೇರೆಗೆ ವಿವಾಹವನ್ನು ವಧು ಅಥವಾ ವರ ವಾಸವಿರುವ ಸ್ಥಳದ ವ್ಯಾಪ್ತಿಯ ಅಧಿಕಾರಿ ಕಛೇರಿಯಲ್ಲಿ ನೋಂದಾಯಿಸಬಹುದು.
  • (iii)ಪಾರಿ ವಿವಾಹವನ್ನು ವಿವಾಹ ನೆರೆವೇರಿಸಲ್ಪಟ್ಟ ಸ್ಥಳದ ವ್ಯಾಪ್ತಿಯ ಜಿಲ್ಲಾನೋಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಾಯಿಸಬಹುದು.

 

  1. ವಿವಾಹ ನೋಂದಣಿ ಕಛೇರಿಯು ಎಲ್ಲಿ ಇರುತ್ತದೆ? ವಿವಾಹ ನೋಂದಣಾಧಿಕಾರಿ ಯಾರು?

ಹಿಂದೂ ವಿವಾಹ ಮತ್ತು ವಿಶೇಷ ವಿವಾಹಗಳಿಗೋಸ್ಕರ ಸ್ಥರಾಸ್ತಿಗಳ ವ್ಯವಹರಣೆಯ ದಸ್ತಾವೇಜುಗಳನ್ನು ನೋಂದಾಯಿಸಲ್ಪಡುವ ತಾಲ್ಲೂಕು ಆಥವಾ ಕೆಲವು ಹೋಬಳಿ ಕೇಂದ್ರಗಳಲ್ಲಿರುವ ಸಬ್-ರಿಜಿಸ್ಟಾರ್ ಕಛೇರಿಗಳೇ ಮದುವೆ ನೋಂದಣಿ ಕಛೇರಿಗಳಾಗಿದ್ದು, ಹಾಗೂ ಸಬ್- ರಿಜಿಸ್ಟಾರ್ ರವರೇ ಮದುವೆ ಅಧಿಕಾರಿಯಾಗಿರುತ್ತಾರೆ. 

 

  1. ಹಿಂದೂ ವಿವಾಹ ನೋಂದಣಿ ಆದಿನಿಯಮ, 1965 ಕಾಯ್ದೆಯು ಯಾರಿಗೆ ಅನ್ವಯಿಸುತ್ತದೆ?

ಹಿಂದೂಗಳು, ಬೌದ್ದರು, ಸಿಖ್ಖರು, ಬ್ರಹ್ಮೋ, ಪ್ರರ್ಥನಾ ಅಥವಾ ಆರ್ಯ ಸಮಾಜದ ಅನುಯಾಯಿಗಳಿಗೆ ಅನ್ವಯಿಸುತ್ತದೆ. ಮುಸ್ಲಿ, ಕ್ರಿಷ್ಚಿಯನ್, ಪಾರ್ಸಿ ಅಥವಾ ಜ್ಯೂ (Jew) ಸಮಾಜದವರಿಗೆ ಈ ಕಾಯ್ದೆಯು ಅನ್ವಯಿಸುವುದಿಲ್ಲ.  ಆದರೆ ಹಿಂದೂ ಕಾಯ್ದೆ ಹಿಂದೂ ಪದ್ದತಿಗಳನ್ನು ಪಾಲಿಸುವ ಹಿಂದೂ ವಿವಾಹ ನೋಂದಣಿ ಕಾಯ್ದೆ ವ್ಯಾಪ್ತಿಯ ಪ್ರದೇಶಗಳ ಒಳಗೆ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೆ ಅನ್ವಯಿಸುತ್ತದೆ.

 

  1. ವಿಶೇಷ ವಿವಾಹ ಕಾಯ್ದೆ 1954 ಯಾರಿಗೆ ಅನ್ವಯಿಸುತ್ತದೆ?

ದೇಶ, ಭಾಷೆ, ಧರ್ಮ, ಜಾತಿ ಜನಾಂಗದ ಭೇದವಿಲ್ಲದೆ ಎಲ್ಲರಿಗೂ ಅನ್ವಯಿಸುತ್ತದೆ.

  1. ಪಾರಿ ವಿವಾಹ ಕಾಯ್ದೆಯು ಯಾರಿಗೆ ಅನ್ವಯಿಸುತ್ತದೆ.

ಪಾರಿ ಝೋರಾ ಸ್ಟ್ರೀಯನ್‌ರಿಗೆ ಅನ್ವಯಿಸುತ್ತದೆ.

  1. ಮದುವೆಯಾಗಲು ವಧು ವರರ ವಯಸ್ಸು ಎಷ್ಟಿರಬೇಕು?

ವಧುವಿಗೆ 18 ವರ್ಷ ಹಾಗೂ ವರನಿಗೆ 21 ವರ್ಷ ವಯಸ್ಸು ಪೂರ್ತಿಯಾಗಿರಬೇಕು.

  1. ವಿವಾಹ ನೋಂದಣಿಗೆ ನಿರ್ಭಂದಗಳೇನಾದರೂ ಇವೆಯೇ

ಹಿಂದೂ ವಿವಾಹ ಕಾಯ್ದೆ 1955 ಮತ್ತು ವಿಶೇಷ ವಿವಾಹ ಕಾಯ್ದೆ 1954ರ ಅಡಿ ನೆರವೇರಿಸಲ್ಪಡುವ ಮದುವೆಗಳಿಗೆ ಈ ಕೆಳಕಂಡAತೆ ಸಾಮಾನ್ಯ  ನಿರ್ಬಂದನೆಗಳಿರುತ್ತವೆ.

  1. ವಿವಾಹ ಸಂದರ್ಭದಲ್ಲಿ ವಿವಾಹವಾಗಲಿಚ್ಚಿಸುವ ವರ ಅಥವಾ ವಧುವಿಗೆ ಈ ಮುಂಚೆಯೇ ಮದುವೆ ಆಗಿರುವ ಜೀವಿತ ಪತಿ ಅಥವಾ  ಪತ್ನಿ ಇದ್ದಲ್ಲಿ ಅವರು ವಿವಾಹಕ್ಕೆ ಅರ್ಹರಲ್ಲ.
  2. ಬುದ್ದಿ ಬ್ರಮಣೆಯಿಂದಾಗಿ ವರ ಅಥವಾ ವಧುಯ ಸ್ವ ಇಚ್ಚೆಯಿಂದ ಮದುವೆಗೆ ಒಪ್ಪಿಗೆ ಕೊಡಲು
  • ಅಸಮರ್ಥರಿದ್ದಲ್ಲಿ ವಿವಾಹಕ್ಕೆ ಅರ್ಹರಲ್ಲ.
  1. ಮದುವೆಗೆ ಸ್ವ ಇಚ್ಚೆಯಿಂದ ಒಪ್ಪಿಗೆ ಕೊಡಲು ಸಮರ್ಥರಿದ್ದು, ಆದರೆ ಮದುವೆ ಮಾಡಿಕೊಳ್ಳಲು ಹಾಗೂ ಮದುವೆಯಾದ ನಂತರ ಮಕ್ಕಳನ್ನು ಪಡೆಯಲು ಅಸಮರ್ಥರೆನಿಸುವಷ್ಟು ಮಟ್ಟಿಗೆ ಮಾನಸಿಕವಾಗಿ  ಅಸ್ವಸ್ತರಿರುವವರು.
  2. ಮರುಕಳಿಸಿ ಬರುವ ಹುಚ್ಚುತನ (insanity) ಮತ್ತು ಮೂರ್ಛೆ ರೋಗದಿಂದ (epilesy) ಬಳಲುತ್ತಿರುವವರು.
  3. ವರನಿಗೆ 21ವರ್ಷ ವಧುವಿಗೆ 18 ವರ್ಷ ತುಂಬಿರದಿದ್ದರೆ, ಮದುವೆಯಾಗುವವರು ಒಬ್ಬರಿಗೊಬ್ಬರು ನಿಷೇದಿಸಲ್ಪಟ್ಟ ಸಂಬಂಧಿಕರುಗಳು ಆಗಿದ್ದಲ್ಲಿ ಮದುವೆ ಸಾಧ್ಯವಿಲ್ಲ. ಆದರೆ ಪದ್ದತಿ ಅಥವಾ ರೂಢಿಯಲ್ಲಿ ಇಂತಹ ಸಂಬಂಧಗಳ ನಡುವೆ ಮದುವೆ ಅನುಮತಿಸಲ್ಪಟ್ಟಿದ್ದರೆ, ಅಂತಹ ಸಂಬಂಧಗಳಿಗೆ ಒಳಪಡುವವರುಗಳ ನಡುವೆ ಮದುವೆ ಸಾಧ್ಯ.
  • ವರ ಮತ್ತು ವಧುಗಳಿಬ್ಬರು ತಾಯಿಯ ಕಡೆಯಿಂದ ಮೂರು ತಲೆಮಾರಿನವರೆಗಿನ ವಂಶಾವಳಿಯಲ್ಲಿ ಹಾಗೂ ತಂದೆಯ ಕಡೆಯಿಂದ ಐದು ತಲೆಮಾರಿನವರೆಗಿನ ವಂಶಾವಳಿಯಲ್ಲಿ ಬರುತ್ತಿದ್ದರೆ ಅಂತವರು ಮದುವೆಗೆ ಅರ್ಹರಲ್ಲ. (ಸಗೋತ್ರದವರು ಮದುವೆಗೆ ಅರ್ಹರಲ್ಲ)
  1. ಮದುವೆಯನ್ನು ಹೇಗೆ ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ನೋಂದಾಯಿಸುವುದು?
  2. ಆಯಾ ಸಾಮಾಜಿಕ ಪದ್ದತಿಗಳ ಪ್ರಕಾರ ಮದುವೆಯಾದ ನಂತರ ನಿಗಧಿತ ಮದುವೆ ನೋಂದಣಿ ಫಾರ್ಮ್ ಲ್ಲಿ ವರ, ವಧು   ಮತ್ತು ಮದುವೆ ಸಂದರ್ಭದಲ್ಲಿ ಹಾಜರಿದ್ದ ಮೂರು ಜನ ಸಾಕ್ಷಿಗಳು ತಮ್ಮ ಹೆಸರು, ವಿಳಾಸ ಇತ್ಯಾದಿಗಳನ್ನು ಬರೆದು ಸಹಿ ಮಾಡಿ (ವಧೂ ವರರ ಜೋಡಿ ಫೋಟೊ) ಸಹಿತ ನಿಗದಿತ ನಮೂನೆಯ ಅರ್ಜಿಯೊಂದಿಗೆ ವಿವಾಹ ನೋಂದಣಾಧಿಕಾರಿಯವರಿಗೆ ದ್ವಿ  ಪ್ರತಿಯಲ್ಲಿ ಖುದ್ದಾಗಿ ಇಲ್ಲವೆ ಅಂಚೆ ಮೂಲಕ ಸಲ್ಲಿಸಬೇಕು ವಿವಾಹ ದಾಖಲೆಯನ್ನು ಫೈಲ್ ಮಾಡಲು ನೋಂದಣಿ ಫೀ ರೂ.೫/-.
  3. ಮದುವೆ ಅಧಿಕಾರಿಯು ಅಂತಹ ದಾಖಲಾತಿಗಳನ್ನು ಪರಿಶೀಲಿಸಿ ಕಾನೂನು ಪ್ರಕಾರ ಸರಿಯಾಗಿದೆಯೆಂದು ಮನವರಿಕೆಯಾದಲ್ಲಿ ಸಂಬಂಧ ಪಟ್ಟ ರಿಜಿಸ್ಟರ್‌ಗಳಲ್ಲಿ ಮದುವೆಯ ವಿವರಗಳನ್ನು ದಾಖಲಿಸಿ ಮದುವೆ ಪ್ರಮಾಣ ಪತ್ರವನ್ನು ನೀಡುವರು.
  4. ವಿವಾಹಗಳನ್ನು ವಿಶೇಷ ವಿವಾಹ ಅಧಿನಿಯಮ 1954ರ ಅಡಿಯಲ್ಲಿ ಹೇಗೆ ನೋಂದಾಯಿಸುವುದು?
  5. ವಧೂ-ವರರಿಬ್ಬರೂ ನಿಗದಿಪಡಿಸಿದ ನೋಟಿಸನ್ನು ದ್ವಿ ಪ್ರತಿಯಲ್ಲಿ ಭರ್ತಿ ಮಾಡಿ ಮದುವೆ ನೋಂದಣಿ ಅಧಿಕಾರಿಗೆ ನಿಗದಿಪಡಿಸಿದ ರೂ.೩-೦೦ ಶುಲ್ಕದೊಂದಿಗೆ ಸಲ್ಲಿಸಬೇಕು. ಈ ಪ್ರಕಾರ ನೋಟೀಸು ನೀಡುವ ದಿನಕ್ಕಿಂತ ಮುಂಚಿತವಾಗಿ ವರ ಅಧವಾ ವಧುಗಳಲ್ಲೊಬ್ಬರು ಮದುವೆ ಅಧಿಕಾರಿ ಕಛೇರಿಯ ವ್ಯಾಪ್ತಿಯೊಳಗೆ ೩೦ ದಿವಸಕ್ಕಿಂತ ಕಡಿಮೆಯಿಲ್ಲದಷ್ಟು ಅವಧಿ ಸತತವಾಗಿ ವಾಸಿಸಿರಬೇಕು.
  6. ಮದುವೆ ನೋಟೀಸು ನೀಡಿದ ೩೦ ದಿವಸಗಳ ಒಳಗಾಗಿ ಯಾವುದೇ ಆಕ್ಷೇಪಣೆಗಳು ಬಾರದ್ದಿದ್ದಲ್ಲಿ ನಂತರದ 30 ದಿನಗಳ ಒಳಗಾಗಿ ವಧು ವರರಿಬ್ಬರೂ 03 ಜನ ಸಾಕ್ಷಿಗಳೊಂದಿಗೆ ಮದುವೆ ಅಧಿಕಾರಿಯ ಮುಂದೆ ಹಾಜರಾಗಿ ನಿಗದಿತ ಘೋಷಣೆಗೆ ಮದುವೆ ಅಧಕಾರಿಯ ಸಮಕ್ಷಮದಲ್ಲಿ ಸಹಿ ಮಾಡಿ ಸಲ್ಲಿಸಬೇಕು. ಒಂದು ವೇಳೆ ಮದುವೆ ನೋಟಿಸು ನೀಡಿದ 30 ದಿನಗಳ ಒಳಗಾಗಿ ಮದುವೆ ನೇರವೇರದಿದ್ದಲ್ಲಿ ಪುನಃ ಮದುವೆ ನೋಟೀಸ್ ನೀಡಬೇಕಾಗುತ್ತದೆ.
  • ಮದುವೆ ಅಧಿಕಾರಿಯು ನಿರ್ದಿಷ್ಟಪಡಿಸಿದ ಪ್ರಮಾಣ ವಚನವನ್ನು ವಧೂ-ವರರಿಬ್ಬರೂ ಹೇಳಿದ ನಂತರ ಮದುವೆಯನ್ನು ನೇರವೇರಿಸುವರು. ಮದುವೆ ಪ್ರಮಾಣ ಪತ್ರಕ್ಕೆ ವಧೂ-ವರರು ಮತ್ತು ಮೂರು ಜನ ಸಾಕ್ಷಿಗಳ ಸಹಿ ಪಡೆದು ಮದುವೆ ಪ್ರಮಾಣ ಪತ್ರ ನೀಡುವರು.

 

  1. ವಿವಾಹವನ್ನು ಎಷ್ಟು ಅವಧಿಯೋಳಗೆ ನೋಂದಣಿ ಮಾಡಿಸಬೇಕು?

ಹಿಂದೂ ವಿವಾಹ ಮತ್ತು ಪರ‍್ಸಿ ವಿವಾಹಗನ್ನು ಮದುವೆಯಾದ ನಂತರ ಯಾವಗಲಾದರೂ ನೋಂದಾಯಿಸಬಹುದು. ಅವಧಿಯ ನಿರ್ಭಂಧವಿರುವುದಿಲ್ಲ.

  1. ವಿಶೇಷ ವಿವಾಹ ಕಾಯ್ದೆ. 1954 ಅಡಿ ನೆರವೇರಿಸಲ್ಪಡುವ ಮದುವೆಯನ್ನು ಮದುವೆ ಅಧಿಕಾರಿಯ ಕಛೇರಿಯಲ್ಲಿಬ ಅಲ್ಲದೆ ಬೇರೆ ಸ್ಧಳಗಳಲ್ಲಿ ನೇರವೇರಿಸಲು ಸಾದ್ಯವೇ?

 ಅಂತಹ ಸ್ಧಳಗಳಲ್ಲಿ ಸ್ಧಳವು ಮದುವೆ ಅಧಿಕಾರಿ ಕಛೇರಿಯ ವ್ಯಾಪ್ತಿಯೊಳಗಿನ ಪ್ರದೇಶದಲ್ಲಿದ್ದರೆ ವಧು-ವರರ ಕೋರಿಕೆಯ ಮೇರೆಗೆ ಅಂತಹ ಸ್ಧಳಗಳಲ್ಲಿ ಮದುವೆಯು ನೇರವೇರಿಸಲ್ಪಡುವುದು.

  1. ಮುಂಚೆಯೇ ಧಾರ್ಮಿಕ ಪದ್ದತಿ ಪ್ರಕಾರ ಮದುವೆಯಾಗಿದ್ದು, ಮದುವೆ ನೋಂದಣಿ ಮಾಡಿಸದೆ ಇದ್ದಲ್ಲಿ ಈಗ ನೋಂದಣಿ ಮಾಡಿಸಲು ಬರುವುದೇ? ಹಾಗಿದ್ದಲ್ಲಿ ಹೇಗೆ ನೋಂದಾಯಿಸಬಹುದು?

 ವಿಶೇಷ ವಿವಾಹ ಕಾಯಿದೆ. 1954ರ ಕಲಂ 16 ರಂತೆ ಮದುವೆ ನೋಂದಾಯಿಸಬಹುದು ನಿಗದಿತ ಅರ್ಜಿ ಫಾರ್ಮನ್ನು ದ್ವಿ ಪ್ರತಿಯಲ್ಲಿ ಭರ್ತಿಮಾಡಿ ನಿಗಧಿಪಡಿಸಿದ ಶುಲ್ಕದೊಂದಿಗೆ ಮದುವೆ ಅಧಿಕಾರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲ್ಟಟ್ಟ ದಿನಾಂಕದಿಂದ 30 ದಿನಗಳ ನಂತರ ಯಾವಾಗಲಾದರೂ ಮದುವೆ ಅಧಿಕಾರಿಯ ಮುಂದೆ ದಂಪತಿಗಳಿಬ್ಬರೂ 3 ಜನ ಸಾಕ್ಷಿಗಳೂಂದಿಗೆ ಹಾಜರಾದಲ್ಲಿ ಹಾಗೂ ಮದುವೆ ನೋಂದಾಯಿಸಲು ಯಾವುದೇ ಆಕ್ಷೇಪಣೆಗಳು ಬಾರದಿದ್ದಲ್ಲಿ ಹಾಗೂ ಮದುವೆಯು ಈ ಕೆಳಕಂಡ ಷರತ್ತುಗಳಿಗೆ ವಿರೋಧವಾಗಿಲ್ಲದಿದ್ದಲ್ಲಿ ಮದುವೆ ಅಧಿಕಾರಿಯು ಮದುವೆಯನ್ನು ನೋಂದಾಯಿಸುವರು.


 
ಮದುವೆ ನೋಂದಣಿ ಷರತ್ತುಗಳು:

  1. ದಂಪತಿಗಳಿಬ್ಬರೂ ಮದುವೆಯಾಗಿರಬೇಕು ಹಾಗೂ ಮದುವೆಯಾದಾಗಿನಿಂದ ಒಟ್ಟಾಗಿ ಜೀವಿಸುತ್ತಿರಬೇಕು.
  2. ಮುದುವೆ ನೋಂದಣಿ ಸಂದರ್ಭದಲ್ಲಿ ದಂಪತಿಗಳ ಪೈಕಿ ಯಾರೊಬ್ಬರಿಗೂ ಒಬ್ಬರಿಗಿಂತ ಹೆಚ್ಚು ಜೀವಿತ ಪತಿ ಅಥವಾ ಪತ್ನಿ ಇರಬಾರದು.
  • ಮದುವೆ ನೋಂದಣಿ ಸಂದರ್ಭದಲ್ಲಿ ಯಾರೊಬ್ಬರು ಬುದ್ದಿಹೀನ (Idiot) ಅಥವಾ ಹುಚ್ಚ (Lulatic) ಆಗಿರಬಾರದು.
  1. ದಂಪತಿಗಳಿಬ್ಬರಿಗೂ 21 ವರ್ಷ ವಯಸ್ಸು ಪೂರ್ತಿಯಾಗಿರಬೇಕು.
  2. ವಿಶೇಷ ವಿವಾಹ ಕಾಯ್ದೆ 1954ರ ಷೆಡ್ಯೂಲ್ 1ರಲ್ಲಿ ಸೂಚಿಸುವಂತೆ ನಿಷೇದಿಸಲ್ಪಟ್ಟ ಸಂಬಂಧಗಳ ಅಡಿ ಸಂಬಂಧಿಕರಾಗಿರಬಾರದು.
  3. ದಂಪತಿಗಳಿಬ್ಬರೂ ಮದುವೆ ನೋಂದಣಿ ಅರ್ಜಿ ಸಲ್ಲಿಸುವ ಪೂರ್ವದಲ್ಲಿ ೩೦ ದಿನಗಳಿಗಿಂತ ಕಡಿಮೆ ಇಲ್ಲದಷ್ಟು ಅವಧಿ ನಿರಂತರವಾಗಿ ಮದುವೆ ಅಧಿಕಾರಿಯ ಕಛೇರಿಯ ಪ್ರದೇಶದ ವ್ಯಾಪ್ತಿಯೊಳಗೆ ವಾಸಿಸುತ್ತಿರಬೇಕು.
  4. ಮದುವೆ ನೋಂದಣಿಗೆ ಭರಿಸಬೇಕಾದ ಶುಲ್ಕ ಎಷ್ಟು?
  5. ಹಿಂದೂ ವಿವಾಹ ನೋಂದಣಿಗೆ ಶುಲ್ಕವಿರುವುದಿಲ್ಲ. ಅರ್ಜಿ ಶುಲ್ಕ ರೂ.5-೦೦, ಮದುವೆ ಪ್ರಮಾಣ ಪತ್ರದ   ಪ್ರತಿಯೊಂದಕ್ಕೆ  ರೂ.10-೦೦.

 

  1. ವಿಶೇಷ ವಿವಾಹ ಕಾಯಿದೆ, 1954 ರ ಅಡಿ ಮದುವೆ ನೆರವೇರಿಸಲಿಕ್ಕೆ ರೂಪಾಯಿ 10-೦೦, ಮದುವೆ ಅಧಿಕಾರಿಯ ಕಛೇರಿಯಲ್ಲಿ ಅಲ್ಲದೆ ಬೇರೆ ಸ್ಧಳಗಳಲ್ಲಿ ನೆರವೇರಿಸಲ್ಪಟ್ಟರೆ ಹೆಚ್ಚುವರಿ ಶುಲ್ಕ ರೂ 15-೦೦, ಮದುವೆ ಪ್ರಮಾಣ ಪತ್ರದ ಪ್ರತಿಯೊಂದಕ್ಕೆ ರೂ.2-೦೦ ಮತ್ತು ಮದುವೆ ನೋಟಿಸ್ ಶುಲ್ಕ ರೂ.3-೦೦.

ಇತ್ತೀಚಿನ ನವೀಕರಣ​ : 29-03-2023 12:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080