ಅಭಿಪ್ರಾಯ / ಸಲಹೆಗಳು

ಪಾಲುಗಾರಿಕೆ ಅಧಿನಿಯಮ

ಪ್ರ.1  ಪಾಲುದಾರಿಕೆ ಸಂಸ್ಥೆ ಎಂದರೇನು?
ಉ:  ಒಬ್ಬನಿಗಿಂತ ಹೆಚ್ಚಿಗೆ ವ್ಯಕ್ತಿಗಳು ಸೇರಿ ಒಟ್ಟಾಗಿ ಅಥವಾ ಉಳಿದವರ ಪರವಾಗಿ ಯಾರಾದರೊಬ್ಬರು ವ್ಯಾಪಾರವನ್ನು ಮಾಡಿ ಅದರ ಲಾಭವನ್ನು ಹಂಚಿಕೊಳ್ಳಲು ಕರಾರು ಮಾಡಿಕೊಳ್ಳುವ ವ್ಯವಹಾರ ಸಂಬಂಧವನ್ನು ಪಾಲುದಾರಿಕೆ ಎಂದು ಹೇಳಿರುತ್ತಾರೆ.
ಪ್ರ. 2  ಪಾಲುಗಾರಿಕೆ ಸಂಸ್ಥೆಯನ್ನು ಪ್ರಾರಂಭಿಸಲು ಕನಿಷ್ಟ ಮತ್ತು ಗರಿಷ್ಟ ಎಷ್ಟು ವ್ಯಕ್ತಿಗಳು ಇರಬಹುದು?
ಉ:  ಪಾಲುದಾರಿಕೆಯನ್ನು ಪ್ರಾರಂಭಿಸಲು ಕನಿಷ್ಟ ಇಬ್ಬರು ವ್ಯಕ್ತಿಗಳು ಬೇಕೆದ್ದು, ಹಣಕಾಸಿನ ವ್ಯವಹಾರಗಳನ್ನು ಮಾಡುವ ಸಂಸ್ಥೆಯಾಗಿದ್ದಲ್ಲಿ ಗರಿಷ್ಟ 10 ಜನ ಇತರ ಯಾವುದಾದರೂ ವ್ಯಾಪಾರವನ್ನು ಮಾಡುವುದಾದಲ್ಲಿ ಗರಿಷ್ಟ 20 ವ್ಯಕ್ತಿಗಳು ಇರಬಹುದು.(ಕಂಪನಿ ಕಾಯಿದೆಯ ವಿಧಿ 11(2))
ಪ್ರ.3  ಪಾಲುದಾರಿಕೆಯು ಯಾವ ಅವಧಿಯಾಗಿರಬಹುದು?
ಉ:  ಪಾಲುಗಾರಿಕೆಗೆ ಯಾವುದೇ ಅವಧಿಯನ್ನು ನಿಗಧಿಪಡಿಸಬಹುದು ಅಥವಾ ಇಷ್ಟವಿದ್ದಷ್ಟು ದಿವಸ ಎಂದು ನಿಗದಿಪಡಿಸಬಹುದು. ಒಂದು ಪಕ್ಷ ನಿಗದಿಪಡಿಸದಿದ್ದಲ್ಲಿ ಪಾಲುದಾರರು ಬಯಸುವವರೆಗೂ ಪಾಲುಗಾರಿಕೆಯು ಮುಂದುವರೆಯುತ್ತದೆ. (ಭಾರತೀಯ ಪಾಲುಗಾರಿಕೆ ಕಾಯಿದೆ, 1932 ರ ವಿಧಿ-7)
ಪ್ರ.4  ಪಾಲುಗಾರಿಕೆಯನ್ನು ದಸ್ತಾವೇಜಿನ ಮುಖಾಂತರ ಮಾಡಿಕೊಳ್ಳುವ ಅವಶ್ಯಕತೆ ಇದೆಯೇ?
ಉ:  ಸಾಮಾನ್ಯವಾಗಿ ಹೌದು. ಕರ್ನಾಟಕ ಮುದ್ರಾಂಕ ಕಾಯಿದೆ.  1957 ರ ಷೆಡ್ಯೂಲ್ ನ ಆರ್ಟಿಕಲ್ 40 ರಲ್ಲಿ ವಿಧಿಸಿದಂತೆ ಪಾಲುಗಾರಿಕೆಯ ಬಂಡವಾಳವು ರೂ 5000-00 ಗಳನ್ನು ಮೀರದ್ದಲ್ಲಿ ರೂ. 100-00 ಛಾಪಾ ಕಾಗದದ ಮೇಲೂ, ರೂ. 5000-00 ಮೀರಿದ್ದಲ್ಲಿ ರೂ. 1000ರ ಛಾಪಾ ಗಾಗದದ ಮೇಲೂ ಬರೆಯತಕ್ಕದ್ದು.
ಪ್ರ.5  ಪಾಲುಗಾರಿಕೆ ಸಂಸ್ಥೆಯನ್ನು ನೋಂದಣಿ ಮಾಡಿಸುವುದು ಕಡ್ಡಾಯವೇ?
ಉ:  ಇಲ್ಲ. ಅದರ ನೋಂದಣಿ ಮಾಡಿಸದಿದ್ದಲ್ಲಿ ಈ ಕೆಳಕಂಡ ಪರಿಣಾಮಗಳಿಗೆ ಎಡೆಮಾಡಿಕೊಡುತ್ತದೆ. 
ಪ್ರ.6  ಪಾಲುಗಾರಿಕೆಯ ಸಂಸ್ಥೆಯನ್ನು ನೋಂದಾಯಿಸುವ ಅಧಿಕಾರಿ ಯಾರು ಮತ್ತು ಪಾಲುಗಾರಿಕೆಯ ಸಂಸ್ಥೆಯ ನೋಂದಾವಣಿಗಾಗಿ ಯಾರಿಗೆ ಯಾವ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು?
ಉ:  ಜಿಲ್ಲಾ ನೋಂದಣಾಧಿಕಾರಿಗಳು ಆಯಾ ಜಿಲ್ಲೆಗಳ ಪಾಲುಗಾರಿಕೆ ಸಂಸ್ಥೆಯ ರಿಜಿಸ್ಟ್ರಾರ್ ಆಗಿರುತ್ತಾರೆ ಮತ್ತು ಅವರಿಗೆ ಪ್ರಪತ್ರ ಸಂಖ್ಯೆ 1 ರಲ್ಲಿ ಪಾಲುಗಾರಿಕೆ ಸಂಸ್ಥೆಯ ನೋಂದಾವಣಿಗಾಗಿ ಅರ್ಜಿ ಸಲ್ಲಿಸಬೇಕು (1932ರ ಭಾರತೀಯ ಪಾಲುಗಾರಿಕೆ ಕಾಯಿದೆ ವಿಧಿ 57 ಮತ್ತು 58.)
ಪ್ರ.7  ಪಾಲುಗಾರಿಕೆ ನೋಂದಣಿಗಾಗಿ ಹೇಗೆ ಮತ್ತು ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಇದಕ್ಕೇನಾದರೂ ಕಾಲ ಮಿತಿ ಇದೆಯೇ?
ಉ:  ಪಾಲುಗಾರಿಕೆಯನ್ನುಯ ಪ್ರಾರಂಭಿಸುವ ಸ್ಥಳದ ನೋಂದಾಣಾಧಿಕಾರಿಗೆ ಅರ್ಜಿಯನ್ನು ಮುಖತಃ ಅಥವಾ ಅಂಚೆ ಮೂಲಕ ನಿಗದಿಪಡಿಸಿದ ಶುಲ್ಕವಾದ ರೂ. 100-00 ದೊಂದಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಕಾಲ ಮಿತಿಯಿಲ್ಲ. 
ಪ್ರ.8  ನೋಂದಾವಣಿ ಮಾಡಿದ ಬಗ್ಗೆ ದೃಢೀಕರಣವನ್ನೇನಾದರೂ ನೀಡಲಾಗುವುದೇ?
ಉ:  ನೋಂದಾವಣಿ ಮಾಡಿದಕ್ಕಾಗಿ  ನಿಗದಿಪಡಿಸಿದಂತೆ ಪ್ರಪತ್ರ  “ಸಿ” ಯಲ್ಲಿ ಸ್ವೀಕೃತಿಯನ್ನು ನೀಡಲಾಗುವುದು.(ನಿಯಮ 10) 
ಪ್ರ.9  ಪಾಲುಗಾರಿಕೆಗೆ ಯಾವುದೇ ಹೆಸರನ್ನಾದರೂ ಇಡಬಹುದೇ?
ಉ:  Crown, Emperor, Empress, Imperial, King, Queen, Royal ಅಥವಾ ಸರ್ಕಾರದಿಂದ ಮಾನ್ಯತೆ ಪಡೆದಿದೆ ಎಂಬ ಅಭಿಪ್ರಾಯ ಬರುವಂತಹ ಹೆಸರುಗಳನ್ನು ಹೊರತುಪಡಿಸಿ ಬೇರೆ ಯಾವ ಹೆಸರನ್ನಾದರೂ ಇಡಬಹುದು (1932ರ ಭಾರತೀಯ ಪಾಲುಗಾರಿಕೆ ಕಾಯಿದೆ ವಿಧಿ 58)
ಪ್ರ.10  ಪಾಲುಗಾರಿಕೆ ಸಂಸ್ಥೆಯ ಬಗ್ಗೆ ಇನ್ನಿತರ ಯಾವ ನೋಮದಾವಣಿಯನ್ನು ಮಾಡಬಹುದು ಮತ್ತು ಅನುಸರಿಸಬಹುದಾದ ಕ್ರಮವೇನು?
ಉ:  ಪಾಲುಗಾರಿಕೆ ಸಂಸ್ಥೆಯ ಹೆಸರಿನ, ವ್ಯಾಪಾರ ಸ್ಥಳಗಳ ಬದಲಾವಣೆಗಳು, ಶಾಖೆಗಳ ಪ್ರಾರಂಭ ಮತ್ತು ಮುಕ್ತಾಯ,ಪಾಲುದಾರರು ಹೆಸರು ಮತ್ತು ವಿಳಾಸದ ಬದಲಾವಣೆ, ಮೈನರ್ ಪಾಲುದಾರನ ಖುಲಾಸೆ ಮತ್ತು ಪಾಲುಗಾರಿಕೆಯ ವಿಘಟನೆಗಳನ್ನು ನೋಂದಾಯಿಸಬಹುದು (1931ರ ಭಾರತೀಯ ಪಾಲಕುಗಾರಿಕೆ ಕಾಯಿದೆ ವಿಧಿ 60,61,62, ಮತ್ತು 63)
ಪ್ರ.11  ನೋಂದಣಾಧಿಕಾರಿಗಳಲ್ಲಿರುವ ದಾಖಲೆಗಳನ್ನು ಯಾರು ಬೇಕಾರದೂ ಪರಿಶೀಲಿಸಬಹುದೇ ಮತ್ತು ದೃಢೀಕೃತ ನಕಲ್ಲನ್ನು ಪಡೆಯಬಹುದೇ?
ಉ:  ನಿಗದಿಪಡಿಸಿದ ಶುಲ್ಕವನ್ನು ನೀಡಿ ನೋಂದಣಾಧಿಕಾರಿಗಳಲ್ಲಿರುವ ಎಲ್ಲ ವರದಿ, ತಿಳುವಳಿಕೆಗಳನ್ನು ಸಾರ್ವಜನಿಕರು ಪರಿಶೀಲಕಿಸಬಹುದು ಮತ್ತು ದೃಢೀಕೃತ ನಕಲನ್ನು ಪಡೆಯಬಹುದು (1932ರ ಭಾರತೀಯ ಪಾಲುಗಾರಿಕೆ ಕಾಯಿದೆ ವಿಧಿ 66 ಮತ್ತು 67).
ಪ್ರ.12  ಪಾಲುಗಾರಿಕೆ ಸಂಸ್ಥೆಯ ನೋಂದಾವಣಿ ಅರ್ಜಿಯಲ್ಲಿ ಯಾವ ವಿವರಗಳಿರಬೇಕು?
ಉ: (ಅ) ಪಾಲಿಗಾರಿಕೆಯ ಸಂಸ್ಥೆಯ ಹೆಸರು
(ಆ) ಮುಖ್ಯ ವ್ಯಾಪಾರಗಳನ್ನು ನಡೆಸಬಹುದಾದ ಇತರೆ ಸ್ಥಳಗಳು
(ಇ) ಪ್ರತಿಯೊಬ್ಬ ಪಾಲುದಾರನು  ಪಾಲುದಾರಿಕೆಯನ್ನು ಸೇರಿದ ದಿನಾಂಕ
(ಈ) ಪ್ರತಿಯೊಬ್ಬ್ ಪಾಲುದಾರರ ಹೆಸರು ಮತ್ತು ಖಾಯಂ ವಿಳಾಸ
(ಉ) ಪಾಲುಗಾರಿಕೆ ಅವಧಿ
  ಎಲ್ಲ ಪಾಲುದಾರರು ಅಥವಾ ಅವರುಗಳ ಅಧಿಕೃತ ಪ್ರತಿನಿಧಿಗಳು ಅರ್ಜಿಗೆ ಸಹಿ ಮಾಡಿರಬೇಕು ಮತ್ತು ಅವರಿಗೆ ಪತ್ರಾಂಕಿತ ಅಧಿಕಾರಿ, ವಕೀಲರು, ಅಟಾರ್ನಿ, ಪ್ಲೀಡರ್ ಅಥವಾ ನೋಂದಾಯಿತ ಅಕೌಂಟೆಂಟ್ ಗಳು ಸಾಕ್ಷಿ ಹಾಕಿರಬೇಕು (ಕರ್ನಾಟಕ ಪಾಲುಗಾರಿಕೆ ಸಂಸ್ಥೆಗಳ ನೋಂದಾವಣಿ ನಿಯಮ 1954ರ ನಿಯಮ 3).
ಪ್ರ.13  ಪಾಲುಗಾರಿಕೆ ಪತ್ರವನ್ನು ನೋಂದಾಯಿಸುವುದಕ್ಕೂ ಪಾಲುಗಾರಿಕೆ ಸಂಸ್ಥೆಯನ್ನು ನೋಂದಾಯಿಸುವುದಕ್ಕೂ ಏನು ವ್ಯತ್ಯಾಸ?
ಉ: ಪಾಲುಗಾರಿಕೆ ಪತ್ರವನ್ನು ನಿಗದಿಪಡಿಸಿದ ಮುದ್ರಾಂಕ ಪತ್ರದ (ಛಾಪಾ ಕಾಗದದ)  ಮೇಲೆ ಬರೆದು ಇತರೆ ಯಾವುದೇ ಪತ್ರಗಳನ್ನು ನೋಂದಾಯಿಸುವ ರೀತಿಯಲ್ಲಿ ಉಪನೋಂದಾಣಿ ಕಛೇರಿಯಲ್ಲಿ ನೋಂದಾಯಿಸಬಹುದು. ಇದರಿಂದ ಪಾಲುಗಾರಿಕೆ ಪತ್ರ ಮಾತ್ರ ನೋಂದಾವಣಿ ಆದಂತಾಗುತ್ತದೆ. ಆದರೆ, ಈ ರೀತಿ ನೋಂದಾಯಿಸಿದ ಮಾತ್ರಕ್ಕೆ ಪಾಲುಗಾರಿಕೆ ಸಂಸ್ಥೆಯನ್ನು ನೋಂದಾಯಿಸಿದಂತೆ ಆಗುವುದಿಲ್ಲ. ಪಾಲುಗಾರಿಕೆ ಸಂಸ್ಥೆಯನ್ನು ನೋಂದಾಯಿಸಬೇಕಾದಲ್ಲಿ 
1932ರ ಭಾರತೀಯ ಪಾಲುಗಾರಿಕೆ ಕಾಯಿದೆ ವಿಧಿ 59ರಂತೆ ಮೇಲೆ ತಿಳಿಸಿದ ಕ್ರಮವನ್ನು ಅನುಸರಿಸಿ ನೋಂದಾಯಿಸಿದಲ್ಲಿ ಇರುವ ಅವಕಾಶಗಳು ಲಭ್ಯವಾಗುತ್ತದೆ. 
ಪ್ರ. 14  ಒಂದು ಪಾಲುಗಾರಿಕೆ ಸಂಸ್ಥೆಯು ಇನ್ನೋಂದು ಪಾಲುಗಾರಿಕೆ ಸಂಸ್ಥೆಯ ಪಾಲುದಾರರಾಗಬಹುದೇ ಹಾಗೂ ಒಂದು ಕಂಪೆನಿಯು ಪಾಲುಗಾರಿಕೆ ಸಂಸ್ಥೆಯ ಪಾಲುದಾರರಾಗಬಹುದೇ?
ಉ:  ಒಂದು ಪಾಲುಗಾರಿಕೆ ಸಂಸ್ಥೆಯು ಇನ್ನೋಂದು ಪಾಲುಗಾರಿಕೆಯ ಸಂಸ್ಥೆಯ ಪಾಲುದಾರರಾಗಲು ಸಾಧ್ಯವಿಲ್ಲ. ಆದರೆ ಒಂದು ಕಂಪೆನಿಯ ಒಂದು ಪಾಲುಗಾರಿಕೆ ಸಂಸ್ಥೆಯ ಪಾಲುದಾರನಾಗಬಹುದು.

ಇತ್ತೀಚಿನ ನವೀಕರಣ​ : 22-02-2024 01:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080