ಅಭಿಪ್ರಾಯ / ಸಲಹೆಗಳು

ದಾಖಲೆಗಳು

 ನೋಂದಣಿ ಸಮಯದಲ್ಲಿ ವರ್ಗಾವಣೆ ದಸ್ತಾವೇಜುಗಳ ಜೊತೆಗೆ ಹಾಜರು ಪಡಿಸಬೇಕಾದ ದೃಢೀಕೃತ ದಾಖಲೆಗಳು

(ಸರ್ಕಾರದ ಸುತ್ತೋಲೆ ಸಂಖ್ಯೆ: ಆರ್ ಡಿ .344 ಮುನೋಮು 2018 ದಿನಾಂಕ: 06-04-2009 ಮತ್ತು ತಿದ್ದುಪಡಿ ಸಂಖ್ಯೆ: ಆರ್ ಡಿ 6 ಮುನೋಮು 2013 ದಿನಾಂಕ:23-04-2014)

) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವತ್ತುಗಳಿಗೆ:-  

ಕ್ರ.ಸಂ

ಹಾಜರು ಪಡಿಸಬೇಕಾದ ದೃಢೀಕೃತ ದಾಖಲೆಗಳು

1

ಅನುಬಂಧ –II  ರಂತೆ ಪ್ರಮಾಣ ಪತ್ರ.

2

ಕರ್ನಾಟಕ ಮುದ್ರಾಂಕ (ದಸ್ತಾವೇಜುಗಳ ಅಪಮೌಲ್ಯ ತಡೆಗಟ್ಟುವಿಕೆ) ನಿಯಮಗಳು-1977ರ ನಿಯಮ 3ರಲ್ಲಿ ನಿಗಧಿಪಡಿಸಿರುವಂತೆ ನಮೂನೆ-1.

3

ಗ್ರಾಮ ಪಂಚಾಯಿತಿ ಸಕ್ಷಮ ಪ್ರಾಧಿಕಾರಿಯಿಂದ ನೀಡಲ್ಪಟ್ಟಿರುವ ಸ್ವತ್ತಿನ ಖಾತೆ ಮತ್ತು ಅಸೆಸ್‍ಮೆಂಟ್ ವಹಿಯ ಉಧೃತ   ಭಾಗ ನಮೂನೆ 1 ಮತ್ತು 12.

4

ಸ್ವತ್ತುಗಳ ಪರಿವರ್ತಿತ ಜಮೀನುಗಳಾಗಿದ್ದಲ್ಲಿ ಸದರಿ ನಮೂನೆ 1 ಮತ್ತು 12 ರ ಜೊತೆಗೆ ಗ್ರಾಮ ಪಂಚಾಯತಿ/ಸಕ್ಷಮ ಪ್ರಾಧಿಕಾರಿಯಿಂದ ನೀಡಲ್ಪಟ್ಟಿರುವ ಪರಿವರ್ತನಾ ಆದೇಶ ಅಥವಾ ಮಂಜೂರಾತಿ ನಕ್ಷೆ.

5

ಸರ್ಕಾರದ ಅಥವಾ ಇದರ ಅಧೀನ ಸಂಸ್ಥೆಗಳಿಂದ/ ಇಲಾಖೆಗಳಿಂದ ಸ್ವತ್ತುಗಳಾಗಿದ್ದಲ್ಲಿ, ಇದರ ಹಕ್ಕು ದಾಖಲೆ ಪತ್ರ ಅಥವಾ ಹಂಚಿಕೆ ಪತ್ರ ಅಥವಾ  ಸ್ವಾಧೀನ ಪತ್ರ ಅಥವಾ ಮಾರಾಟದ ದಾಖಲೆ ಇತ್ಯಾದಿ.

6

ಕ್ರಯದಂತೆ ಹಸ್ತಾಂತರವಾಗುತ್ತಿರುವ ಸ್ವತ್ತಿನ ಮೌಲ್ಯವು ರೂ. 5 ಲಕ್ಷಗಳು ಅಥವಾ ಹೆಚ್ಚಾಗಿದ್ದಲ್ಲಿ, ಆದಾಯ ತೆರಿಗೆ ಇಲಾಖೆಯಿಂದ ನೀಡಲ್ಪಟ್ಟಿರುವ ಶಾಶ್ವತ ಅಕೌಂಟ್ ಸಂಖ್ಯೆ (Permanent Account No.) ಅಥವಾ ನಮೂನೆ-60 ಅಥವಾ 61 ರಲ್ಲಿ ಘೋಷಣೆ.

 •         ವ್ಯಕ್ತಿಗಳ ಗುರುತಿನ ಬಗ್ಗೆ ಪೋಟೋ ಗುರುತಿನ ಪುರಾವೆ

ಬಿ) ಪಟ್ಟಣ ಪಂಚಾಯತಿ / ಪುರಸಭೆ / ನಗರ ಸಭೆ ವ್ಯಾಪ್ತಿಯ ಸ್ವತ್ತುಗಳಿಗೆ :-

ಕ್ರ.ಸಂ

ಹಾಜರು ಪಡಿಸಬೇಕಾದ ದೃಢೀಕೃತ ದಾಖಲೆಗಳು

1

ಅನುಬಂಧ–II  ರಂತೆ ಪ್ರಮಾಣ ಪತ್ರ.

2

ಕರ್ನಾಟಕ ಮುದ್ರಾಂಕ (ದಸ್ತಾವೇಜುಗಳ ಅಪಮೌಲ್ಯ ತಡೆಗಟ್ಟುವಿಕೆ) ನಿಯಮಗಳು-1977ರ ನಿಯಮ 3ರಲ್ಲಿ ನಿಗಧಿಪಡಿಸಿರುವಂತೆ ನಮೂನೆ-1.

3

ಪಟ್ಟಣ ಪಂಚಾತಿ / ಪುರಸಭೆ / ನಗರಸಭೆಯ ಸಕ್ಷಮ ಪ್ರಾಧಿಕಾರಿಗಳಿಂದ ನೀಡಲ್ಪಟ್ಟಿರುವ ಖಾತಾ ಮತ್ತು ತೆರಿಗೆ ನಿರ್ಧರಣೆ ವಹಿಯ ಉದೃತ ಭಾಗ.

4

ಸ್ವತ್ತುಗಳ ಪರಿವರ್ತಿತ ಜಮೀನುಗಳಾಗಿದ್ದಲ್ಲಿ ಸದರಿ ಖಾತಾ ಮತ್ತು ತೆರಿಗೆ ನಿರ್ಧರಣೆ ವಹಿಯ ಉದೃತ  ಭಾಗದ ಜೊತೆಗೆ ಪಟ್ಟಣ ಪಂಚಾತಿ / ಪುರಸಭೆ / ನಗರಸಭೆ / ಸಕ್ಷಮ ಪ್ರಾದಿಕಾರಿಗಳಿಂದ ನೀಡಲ್ಪಟ್ಟಿರುವ ಪರಿವರ್ತನಾ ಆದೇಶ ಅಥವಾ ಮಂಜೂರಾತಿ ನಕ್ಷೆ.

5

ಸರ್ಕಾರದ ಅಥವಾ ಇದರ ಅಧೀನ ಸಂಸ್ಥೆಗಳಿಂದ / ಇಲಾಖೆಗಳಿಂದ ನೀಡಲ್ಪಟ್ಟಿರುವ ಸ್ವತ್ತುಗಳಾಗಿದ್ದಲ್ಲಿ, ಇದರ ಹಕ್ಕು ದಾಖಲೆ ಪತ್ರ  ಅಥವಾ ಹಂಚಿಕೆ ಪತ್ರ ಅಥವಾ ಸ್ವಾಧೀನ ಪತ್ರ ಅಥವಾ ಮಾರಾಟದ ದಾಖಲೆ ಇತ್ಯಾದಿ.

6

ಕ್ರಯದಂತೆ ಹಸ್ತಾಂತರವಾಗುತ್ತಿರುವ  ಸ್ವತ್ತಿನ ಮೌಲ್ಯವು ರೂ. 5 ಲಕ್ಷಗಳು ಅಥವಾ ಹೆಚ್ಚಾಗಿದ್ದಲ್ಲಿ, ಆದಾಯ ತೆರಿಗೆ ಇಲಾಖೆಯಿಂದ ನೀಡಲ್ಪಟ್ಟಿರುವ  ಶಾಶ್ವತ ಅಕೌಂಟ್ ಸಂಖ್ಯೆ (Permanent Account No.)  ಅಥವಾ ನಮೂನೆ-60 ಅಥವಾ 61 ರಲ್ಲಿ ಘೋಷಣೆ.

 •         ವ್ಯಕ್ತಿಗಳ ಗುರುತಿನ ಬಗ್ಗೆ ಪೋಟೋ ಗುರುತಿನ ಪುರಾವೆ

ಸಿ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ / ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ವತ್ತುಗಳಿಗೆ :-

ಕ್ರ.ಸಂ

ಹಾಜರು ಪಡಿಸಬೇಕಾದ ದೃಢೀಕೃತ ದಾಖಲೆಗಳು

1

ಅನುಬಂಧ–II  ರಂತೆ ಪ್ರಮಾಣ ಪತ್ರ.

2

ಕರ್ನಾಟಕ ಮುದ್ರಾಂಕ (ದಸ್ತಾವೇಜುಗಳ ಅಪಮೌಲ್ಯ ತಡೆಗಟ್ಟುವಿಕೆ) ನಿಯಮಗಳು-1977ರ ನಿಯಮ 3ರಲ್ಲಿ ನಿಗಧಿಪಡಿಸಿರುವಂತೆ ನಮೂನೆ-1.

3

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ / ಮಹಾನಗರ ಪಾಲಿಕೆ ಪ್ರಾಧಿಕಾರಿಗಳಿಂದ ನೀಡಲ್ಪಟ್ಟಿರುವ ಖಾತಾ ಮತ್ತು ತೆರಿಗೆ  ನಿರ್ಧರಣೆ ವಹಿಯ ಉದೃತ ಭಾಗ

3A

ಖಾತ ಮತ್ತು ಮೌಲ್ಯಮಾಪನ ಸಾರವನ್ನು ಇತರೆ ನಿಗಮಗಳ ಪ್ರಾಧಿಕಾರದಿಂದ ನೀಡಲಾಗುತ್ತದೆ.

4

ಸ್ವತ್ತುಗಳು ಪರಿವರ್ತಿತ ಜಮೀನುಗಳಾಗಿದ್ದಲ್ಲಿ ಸದರಿ ಖಾತಾ ಮತ್ತು ತೆರಿಗೆ ನಿರ್ಧರಣೆ ವಹಿಯ ಉಧೃತ ಭಾಗದ ಜೊತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ / ಮಹಾನಗರ ಪಾಲಿಕೆ / ಸಕ್ಷಮ ಪ್ರಾಧಿಕಾರಿಗಳಿಂದ ನೀಡಲ್ಪಟ್ಟಿರುವ ಪರಿವರ್ತನಾ ಆದೇಶ ಅಥವಾ ಮಂಜೂರಾತಿ ನಕ್ಷೆ.

5

ಸರ್ಕಾರದ ಅಥವಾ ಇದರ ಅಧೀನ ಸಂಸ್ಥೆಗಳಿಂದ / ಇಲಾಖೆಗಳಿಂದ ನೀಡಲ್ಪಟ್ಟಿರುವ ಸ್ವತ್ತುಗಳಾಗಿದ್ದಲ್ಲಿ, ಇದರ ಹಕ್ಕು ದಾಖಲೆ ಪತ್ರ  ಅಥವಾ ಹಂಚಿಕೆ ಪತ್ರ ಅಥವಾ ಸ್ವಾಧೀನ ಪತ್ರ ಅಥವಾ ಮಾರಾಟದ ದಾಖಲೆ ಇತ್ಯಾದಿ.

6

ಕ್ರಯದಂತೆ ಹಸ್ತಾಂತರವಾಗುತ್ತಿರುವ  ಸ್ವತ್ತಿನ ಮೌಲ್ಯವು ರೂ. 5 ಲಕ್ಷಗಳು ಅಥವಾ ಹೆಚ್ಚಾಗಿದ್ದಲ್ಲಿ, ಆದಾಯ ತೆರಿಗೆ ಇಲಾಖೆಯಿಂದ ನೀಡಲ್ಪಟ್ಟಿರುವ  ಶಾಶ್ವತ ಅಕೌಂಟ್ ಸಂಖ್ಯೆ (Permanent Account No.)   ಅಥವಾ ನಮೂನೆ-60 ಅಥವಾ 61 ರಲ್ಲಿ ಘೋಷಣೆ.

 •         ವ್ಯಕ್ತಿಗಳ ಗುರುತಿನ ಬಗ್ಗೆ ಪೋಟೋ ಗುರುತಿನ ಪುರಾವೆ
 •         ಮೈಸೂರು ಮತ್ತು ಶಿವಮೊಗ್ಗ ನಿಗಮಗಳ ಸಂದರ್ಭದಲ್ಲಿ ಸರಿಯಾದ ಅಧಿಕಾರಿಗಳು ನೀಡುವ ಆಸ್ತಿ ಕಾರ್ಡ್‌ನ ಪ್ರತಿ

ಡಿ) ಕೃಷಿ ಜಮೀನಿನ ವರ್ಗಾವಣೆ ಪತ್ರಗಳ ನೋಂದಣಿ ಸಮಯದಲ್ಲಿ ಪಡೆಯಬೇಕಾದ ದಾಖಲೆಗಳು :-

ಕ್ರ.ಸಂ

ಹಾಜರು ಪಡಿಸಬೇಕಾದ ದೃಢೀಕೃತ ದಾಖಲೆಗಳು

1

ಅನುಬಂಧ–II  ರಂತೆ ಪ್ರಮಾಣ ಪತ್ರ.

2

ಕರ್ನಾಟಕ ಮುದ್ರಾಂಕ (ದಸ್ತಾವೇಜುಗಳ ಅಪಮೌಲ್ಯ ತಡೆಗಟ್ಟುವಿಕೆ) ನಿಯಮಗಳು-1977ರ ನಿಯಮ 3ರಲ್ಲಿ ನಿಗಧಿಪಡಿಸಿರುವಂತೆ ನಮೂನೆ-1.

3

ಜಮೀನಿನ (RTC) ಪಹಣಿ ಪತ್ರ (ಪತ್ರವನ್ನು ನೋಂದಣಿಗೆ ಹಾಜರುಪಡಿಸಿದ ದಿನಾಂಕದ ಹಿಂದಿನ  15 ದಿನಗಳ ಒಳಗೆ ನೀಡಲ್ಪಟ್ಟಿರುವ RTC).

4

ಭೂ ಸುಧಾರಣೆ ಕಾಯ್ದೆ 1961ರ ಕಲಂ 81-ಎ ಅಡಿ ಘೋಷಣಾ ಪತ್ರ.

5

ಕರ್ನಾಟಕ ಪರಿಶಿಷ್ಠ ಜಾತಿ / ಪರಿಶಿಷ್ಠ ಪಂಗಡ ( ಕೆಲವು ಜಮೀನುಗಳ ಪರಬಾರೆ ನಿಷೇದ) ಕಾಯ್ದೆ 1978ರಡಿ (ಕಲಂ 6ರನ್ವರ) ಸಕ್ಷಮ ಪ್ರಾಧಿಕಾರಿಯಿಂದ ನೀಡಲ್ಪಟ್ಟಿರುವ ನಿರಾಕ್ಷೇಪಣ ಪತ್ರ ಅಥವಾ ಅನುಮತಿ ಪತ್ರ.

6

ಜಮೀನಿನ ಸರ್ವೇ ನಕ್ಷೆ (ಸ್ಕೆಚ್)- ನಮೂನೆ-11ಇ (ಕರ್ನಾಟಕ ಭೂ ಕಂದಾಯ ಕಾಯ್ದೆ 1961ರ ಕಲಂ 131 (ಸಿ) ಹಾಗೂ ಕರ್ನಾಟಕ ಭೂ ಕಂದಾಯ ನಿಯಮಗಳ ನಿಯಮ 46(ಎಚ್) ರಡಿ ವಿಧಿಸಿರುವಂತೆ).

7

ಕ್ರಯದಂತೆ ಹಸ್ತಾಂತರವಾಗುತ್ತಿರುವ  ಸ್ವತ್ತಿನ ಮೌಲ್ಯವು ರೂ. 5 ಲಕ್ಷಗಳು ಅಥವಾ ಹೆಚ್ಚಾಗಿದ್ದಲ್ಲಿ, ಆದಾಯ ತೆರಿಗೆ ಇಲಾಖೆಯಿಂದ ನೀಡಲ್ಪಟ್ಟಿರುವ  ಶಾಶ್ವತ ಅಕೌಂಟ್ ಸಂಖ್ಯೆ(Permanent Account No.)  ಅಥವಾ ನಮೂನೆ-60 ಅಥವಾ 61 ರಲ್ಲಿ ಘೋಷಣೆ.

 •         ವ್ಯಕ್ತಿಗಳ ಗುರುತಿನ ಬಗ್ಗೆ ಪೋಟೋ ಗುರುತಿನ ಪುರಾವೆ

ಇತ್ತೀಚಿನ ನವೀಕರಣ​ : 22-02-2024 10:15 AM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080