ಅಭಿಪ್ರಾಯ / ಸಲಹೆಗಳು

ಸಾಂಸ್ಥಿಕ ರಚನೆ

ರಾಜ್ಯ ಮಟ್ಟದಲ್ಲಿ:-

      ಕರ್ನಾಟಕ ಮುದ್ರಾಂಕ ಕಾಯ್ದೆ, 1957 ಮತ್ತು ಕರ್ನಾಟಕ ನ್ಯಾಯಾಲಯ ಫೀ ಮತ್ತು ವ್ಯಾಜ್ಯಾ ಮೌಲ್ಯ ಕಾಯ್ದೆ, 1958ರ ಮೇರೆಗೆ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಹಾಗೂ ರಾಜ್ಯದ ಮುಖ್ಯ ಆದಾಯ ನಿಯಂತ್ರಣ ಪ್ರಾಧಿಕಾರರವರನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮುಖ್ಯಸ್ಥರಾಗಿ ರಾಜ್ಯದಲ್ಲಿ ಇರುತ್ತಾರೆ. ಇವರ ಅಧೀನದಲ್ಲಿ ಈ ಕೆಳಕಂಡ ಸಿಬ್ಬಂದಿಯವರು ಇರುತ್ತಾರೆ.

 1.     ಉಪನೋಂದಣಿ ಮಹಾಪರಿವೀಕ್ಷಕರು (ಕಾನೂನು ಮತ್ತು ಆಡಳಿತ)
 2.     ಉಪನೋಂದಣಿ ಮಹಾಪರಿವೀಕ್ಷಕರು (ಗುಪ್ತದಳ)
 3.     ಉಪನೋಂದಣಿ ಮಹಾಪರಿವೀಕ್ಷಕರು (ವಿಷಕ್ಷಣದಳ)
 4.     ಉಪನೋಂದಣಿ ಮಹಾಪರಿವೀಕ್ಷಕರು (ಕೇಂದ್ರ ಮೌಲ್ಯಮಾಪನ ಸಮಿತಿ)
 5.     ಉಪನೋಂದಣಿ ಮಹಾಪರಿವೀಕ್ಷಕರು (ಜಾಗೃತದಳ)
 6.     ಸಹಾಯಕ ನೋಂದಣಿ ಮಹಾಪರಿವೀಕ್ಷಕರು (ಆಡಳಿತ)
 7.     ಸಹಾಯಕ ನೋಂದಣಿ ಮಹಾಪರಿವೀಕ್ಷಕರು (ಗಣಕೀಕರಣ)
 8.     ಸಹಾಯಕ ನೋಂದಣಿ ಮಹಾಪರಿವೀಕ್ಷಕರು (ಲೆಕ್ಕ ಪರಿಶೋಧನೆ)
 9.     ಕಾನೂನು ಅಧಿಕಾರಿ
 10.     ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರವರ ಕೇಂದ್ರ ಸ್ಥಾನ ಸಹಾಯಕರು  (ಆಡಳಿತ)
 11.     ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರವರ ಕೇಂದ್ರ ಸ್ಥಾನ ಸಹಾಯಕರು (ಲೆಕ್ಕ ಪರಿಶೋಧನೆ)

 

ಜಿಲ್ಲಾ ಹಂತ  :-

     ಜಿಲ್ಲೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ನೋಂದಣಾಧಿಕಾರಿಗಳು ಜಿಲ್ಲೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ. ಕರ್ನಾಟಕ ರಾಜ್ಯದಲ್ಲಿ 35 ಜಿಲ್ಲಾ ನೋಂದಣಾಧಿಕಾರಿಗಳು ಇದ್ದು ಅವರುಗಳು ಈ ಕೆಳಕಂಡ ಕಾಯ್ದೆಗಳ ಅನುಸಾರ ಕರ್ತವ್ಯ ನಿರ್ವಹಿಸುತ್ತಾರೆ.  

 1.     ಭಾರತೀಯ ಪಾಲುಗಾರಿಕೆ ಕಾಯ್ದೆ, 1932
 2.     ಪಾರ್ಸಿ ಮದುವೆ ಮತ್ತು ವಿಚ್ಛೇದನ ಕಾಯ್ದೆ

 

    ಜಿಲ್ಲಾ ನೋಂದಣಾಧಿಕಾರಿಗಳು ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಅನುಸಾರ ಮುದ್ರಾಂಕಗಳ ಜಿಲ್ಲಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.

    ಜಿಲ್ಲಾ ಹಂತದಲ್ಲಿ ಕೇಂದ್ರಸ್ಥಾನ ಸಹಾಯಕರು ಆಡಳಿತ್ಮಕವಾಗಿ ಜಿಲ್ಲಾ ನೋಂದಣಾಧಿಕಾರಿಗಳಿಗೆ ಸಹಾಯಕರಾಗಿತ್ತಾರೆ.

      ನೋಂದಣಿ ಕಾಯ್ದೆ, 1908 ಮತ್ತು ಕರ್ನಾಟಕ ಮುದ್ರಾಂಕ ಕಾಯ್ದೆ, 1957ರಡಿ ಕೇಂದ್ರಸ್ಥಾನ ಸಹಾಯಕರಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ನೇಮಕಗೊಂಡಿರುತ್ತಾರೆ. ಕರ್ನಾಟಕ ಮುದ್ರಾಂಕ ಕಾಯ್ದೆ, 1957ರಡಿ ಕೆಲವು ನಿಬಂಧನೆಗಳನುಸಾರ  ಜಿಲ್ಲಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಾರೆ.

ಸ್ವತ್ತುಗಳ ಅಪಮೌಲ್ಯ ತಡೆಗಟ್ಟುವುದು:

        ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಕಲಂ 45ಎ ಮೇರೆಗೆ ಜಿಲ್ಲಾ ನೋಂದಣಾಧಿಕಾರಿಗಳನ್ನು ಆಯಾ ಜಿಲ್ಲೆಯ ಸ್ವತ್ತಿನ ಅಪಮೌಲ್ಯ ತಡೆಗಟ್ಟುವ ಬಗ್ಗೆ ಜಿಲ್ಲಾಧಿಕಾರಿಗಳಾಗಿ ನೇಮಿಸಿರುತ್ತಾರೆ.

ಉಪ ಜಿಲ್ಲಾ ಹಂತ:

      ರಾಜ್ಯದಲ್ಲಿ 256 ಉಪನೋಂದಣಿ ಕಛೇರಿಗಳಿದ್ದು  ಆಸ್ತಿಗಳ ನೋಂದಣಿ ಕೆಲಸಗಳ ಜೊತೆಗೆ ಹಿಂದೂ ವಿವಾಹ ಕಾಯ್ದೆ, 1955ರ ಮತ್ತು ವಿಶೇಷ ವಿವಾಹ ಕಾಯ್ದೆ, 1954ರ ಮೇರೆಗೆ ವಿವಾಹ ನೋಂದಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಾರೆ.

 

 

 

ಇತ್ತೀಚಿನ ನವೀಕರಣ​ : 07-10-2023 10:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080