ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಸರ್ಕಾರಕ್ಕೆ  ಮೂರನೇ ಹೆಚ್ಚು ರಾಜಸ್ವ ಸಂಗ್ರಹ ಮಾಡುವ ಇಲಾಖೆಯಾಗಿದ್ದು, 2019-20ನೇ ಸಾಲಿನಲ್ಲಿ ರೂ.11451.05 ಕೋಟಿಗಳ ರಾಜಸ್ವವು ಸಂಗ್ರಹವಾಗಿದ್ದು, ಒಟ್ಟು 19.57  ಲಕ್ಷ  ದಸ್ತಾವೇಜುಗಳು ನೋಂದಣಿಯಾಗಿರುತ್ತದೆ.

 

ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ನೋಂದಾಯಿತ ಸಾರ್ವಜನಿಕ ದಾಖಲೆಗಳನ್ನು, ವಿವಾಹಗಳ ನೋಂದಣಿ, ಪಾಲುದಾರಿಕೆ ಸಂಸ್ಥೆಗಳ ನೋಂದಣಿ, ಸ್ಥಿರಾಸ್ತಿಗಳಿಗೆ  ಸಂಬಂಧಿಸಿದ  ಕ್ರಯ, ವರ್ಗಾವಣೆ , ದಾನ ಪತ್ರಗಳು, ಅಡಮಾನ ಪತ್ರ, ಅಧಿಕಾರ ಪತ್ರ , ಇಚ್ಛಾಪತ್ರ ಹಾಗೂ ಇತರೆ ದಾಖಲೆಗಳನ್ನು ಸಂರಕ್ಷಿಸುವ ಜವಬ್ದಾರಿಯನ್ನು  ಹೊಂದಿರುತ್ತದೆ. ಕೆಲವು ಹಳೆಯ ದಾಖಲೆಗಳು 1865 ರಿಂದಲೂ ನಮ್ಮ ಇಲಾಖೆಯಲ್ಲಿ ಇರುತ್ತದೆ. ಈ ಎಲ್ಲಾ ಪ್ರಮುಖ ಸಾರ್ವಜನಿಕ ದಾಖಲೆಗಳ ನಿರ್ವಹಣೆ ಮತ್ತು ಸಂರಕ್ಷಣೆ ಇಲಾಖೆಯ ಜವಬ್ದಾರಿಯಾಗಿರುತ್ತದೆ. ನೋಂದಾಯಿತ ದಾಖಲೆಗಳಿಗೆ ಸಂಬಂಧಿಸಿದ ದಾಖಲೆ ಹಾಗೂ ಮಾಹಿತಿಯನ್ನು ಸಾರ್ವಜನಿಕರು ಕೋರಿದಾಗ ನೀಡಬೇಕಾಗಿರುತ್ತದೆ. ನಿರ್ದಿಷ್ಟ  ವ್ಯವಹಾರಗಳಿಗೆ ಸರ್ಕಾರದ ಪರವಾಗಿ ಮುದ್ರಾಂಕ ಶುಲ್ಕವನ್ನು ಇಲಾಖೆಯು ಸಂಗ್ರಹಿಸುತ್ತದೆ. ಇಲಾಖೆಯು ರಾಜ್ಯದಲ್ಲಿ 34 ಜಿಲ್ಲಾ ನೋಂದಣಿ ಕಛೇರಿಗಳು ಹಾಗೂ 256 ಉಪನೋಂದಣಿ ಕಛೇರಿಗಳ ಮುಖಾಂತರ ಸಾರ್ವಜನಿಕರಿಗೆ ಸೇವೆಗಳನ್ನು ನೀಡುತ್ತಿದೆ.

ಇಲಾಖೆಯ ಸೇವೆಗಳನ್ನು ಕಾವೇರಿ ತಂತ್ರಾಂಶದ  ಮುಖಾಂತರ ಗಣಕೀಕರಣಗೊಳಿಸಲಾಗಿರುತ್ತದೆ. ಕಾವೇರಿ ತಂತ್ರಾಂಶವನ್ನು 2004 ರಲ್ಲಿ ಎಲ್ಲಾ ಉಪನೋಂದಣಿ ಕಛೇರಿಗಳಲ್ಲಿ ‘ಬೂಟ್’ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗಿರುತ್ತದೆ, ಹಾಗೂ ಅಂದಿನಿಂದಲೇ  ಕಾರ್ಯ ನಿರ್ವಹಿಸುತ್ತಿರುತ್ತದೆ. ಕಾವೇರಿ ತಂತ್ರಾಂಶವು ವಿಕೇಂದ್ರೀತ ವ್ಯವಸ್ಥೆಯಾಗಿದ್ದು, ಪ್ರತಿ ಕಛೇರಿಯಲ್ಲಿ ತಂತ್ರಾಂಶ ಹಾಗೂ ಸೃಜಿತ ಮಾಹಿತಿಯ ನಿರ್ವಹಣೆಗೆ ಪ್ರತ್ಯೇಕವಾದ ಸರ್ವರ್ ಅಳವಡಿಸಲಾಗಿರುತ್ತದೆ.

ಆದ್ಯಾಗ್ಯೂ ಇತ್ತೀಚೀನ ದಿನಗಳಲ್ಲಿ ಇಲಾಖೆಯ ಮಾಹಿತಿಯನ್ನು ಕೇಂದ್ರೀಕೃತ ದತ್ತಾಂಶ ವ್ಯವಸ್ಥೆಗೆ ವರ್ಗಾಯಿಸಲಾಗುತ್ತಿದೆ. ಕಾವೇರಿ ತಂತ್ರಾಂಶದ ನೋಂದಣಿ ಪ್ರಕ್ರಿಯೆಯು, ದಾಖಲೆಗಳು ಹಾಗೂ ಮಾಹಿತಿಯ ಡಿಜಿಟಲೀಕರಣದ ವೇಗವನ್ನು ಹೆಚ್ಚಿಸಲು ಸಹಕಾರಿಯಾಗಿರುತ್ತದೆ.

ಇಲಾಖೆಯು ತನ್ನ ಎಲ್ಲಾ ಕಛೇರಿಗಳಲ್ಲಿ ಹಳೆಯ ಹಾರ್ಡವೇರ್ ಗಳಾದ ಡೆಸ್ಕಟಾಪ್, ಸರ್ವರ್ , ಪ್ರಿಂಟರ್, ಸ್ಕ್ಯಾನರ್, ಸ್ವೀಚಸ್, ಯು.ಪಿ.ಎಸ್, ಜೆನರೇಟರ್ ಹಾಗೂ ಇತ್ಯಾದಿಗಳನ್ನು ಬದಲಿಸಲು ಹಾಗೂ ತಂತ್ರಾಂಶಗಳಾದ ಹಾಜರಾತಿ ಬಯೋಮೆಟ್ರಿಕ್ ದೃಡೀಕರಣವಾದ (ಎ.ಟಿ.ಎಂ.ಎಸ್) ಸರ್ವೀಸ್ ಡೆಸ್ಕ್, ಇ.ಎಂ.ಎಸ್ ಹಾಗೂ ಅಸೆಟ್ ಮ್ಯಾನೇಜಮೆಂಟ್  ತಂತ್ರಾಂಶವನ್ನು‌ ರಾಜ್ಯ ದತ್ತಾಂಶ ಕೇಂದ್ರದಲ್ಲಿ ಅನುಷ್ಠಾನಗೊಳಿಸಲು ಮತ್ತು ಗಣಕಯಂತ್ರ ನಿರ್ವಹಕರನ್ನು ಹಾರ್ಡ್ ವೇರ್ ಇಂಜಿನಿಯರ್ ಗಳನ್ನು ಏರಿಯಾ ಮ್ಯಾನೇಜರ್ ಗಳನ್ನು ಹಾಗೂ ಸರ್ವೀಸ್ ಡೆಸ್ಕ್ ಪ್ರತಿನಿಧಿಗಳು ಗಳನ್ನು ಜಿಲ್ಲಾ ಕಛೇರಿ ಹಾಗೂ ಕೇಂದ್ರ ಕಛೇರಿಯಲ್ಲಿ  ಮಾಡಲು 2013ರಲ್ಲಿ ಮೆ:ಹೆಚ್.ಸಿ.ಎಲ್ ಸಂಸ್ಥೆಯ ಸೇವೆಯನ್ನು ಪಡೆಯಲಾಯಿತು.

          ಇಲಾಖೆಯು ಪ್ರಸ್ತುತ ಈ ಕೆಳಗೆ ತಿಳಿಸಿರುವ ಮಾಹಿತಿ ತಂತ್ರಜ್ಞಾನದ ಸೇವೆಗಳಲ್ಲಿ  ತೊಡಗಿಸಿಕೊಂಡಿದೆ:-

 1. ನೋಂದಣಿ ಮಾಡಲು ಬಯಸುವ ಉಪನೋಂದಣಿ ಕಛೇರಿಯಲ್ಲಿ ಮುಂಗಡವಾಗಿ ಸಮಯ ನಿಗದಿಪಡಿಸಲು ಹಾಗೂ ಶುಲ್ಕ ಪಾವತಿಸಿದ ನಂತರ ಟೋಕನ್ ಗಳನ್ನು ನೀಡಲು ಅಂತರ್ಜಾಲದಲ್ಲಿ ವೇದಿಕೆ ಸೃಜಿಸಲಾಗಿದೆ.
 2. ಬೆಂಗಳೂರು ಒನ್ (ಬಿ1) ಹಾಗೂ ಕರ್ನಾಟಕ ಒನ್ (ಕೆ1) ಕೇಂದ್ರಗಳಲ್ಲಿ ದಸ್ತಾವೇಜುಗಳ ದೃಢೀಕೃತ ನಕಲು ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.
 3. ಅಧಿಕೃತ ಸಂವಹನಗಳನನ್ವಯ ಡಿಜಿಟಲೀಕರಣಗೊಳಿಸುವುದು.
 4. ಆರ್.ಡಿ.ಪಿ.ಆರ್,  ಬಿ.ಬಿ.ಎಂ.ಪಿ ಹಾಗೂ ಯು.ಪಿ.ಓ.ಆರ್ ಇಲಾಖೆಗಳೊಂದಿಗೆ ನೋಂದಣಿ ಸಂಯೋಜನೆ ಕಲ್ಪಿಸಲಾಗಿದೆ.
 5. ಡಿಜಿಟಲ್ ಸಹಿಗಳನ್ನು ಉಪಯೋಗಿಸಲಾಗುತ್ತಿದೆ.
 6. ಇ-ಸ್ಟಾಂಪಿಗ್ ವ್ಯವಸ್ಥೆ ಕಲ್ಪಿಸಲಾಗಿದೆ.

 

ಇತ್ತೀಚಿನ ನವೀಕರಣ​ : 21-07-2023 01:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080